Posts

Showing posts from April, 2023

ಭಾವ-ಶೂನ್ಯ

ಮರೆಯಲಾಗದ ಉಸಿರು ನೀನು        ಸೇರುವೆನು ನಾನು ನಿನ್ನಲೇ.... ಎಂದು ಮುಗಿಯದ ಚಿಂತೆ ನೀನು         ಮುಳುಗುವೆನು ನಾನು ನಿನ್ನಲೇ.... ದೂರದ ಸೌಂದರ್ಯವು ನೀನು         ಸೆರೆಹಿಡಿದೆ ನಾನು ಕಣ್ಣಲ್ಲೇ.... ಅರ್ಥವಾಗದ ಬಣ್ಣದ ಚಿತ್ರವು ನೀನು         ಬಿಡಿಸಿದೆ ನಾ ಅದರ ಬಿಳಿಯ ಕುಂಚದಲೇ.. ಹಸಿರು ಚಿಗುರಿನ ಎಳಸು ಗಾಳಿಯೇ         ನಿನ್ನ ಬೀಸುವಿಕೆಯೆಷ್ಟು ಪ್ರಬುದ್ಧ.... ಮೌನ ಮುರಿಯುವ ತುಂಟ ಪ್ರಕೃತಿಯೆ         ನಿನ್ನ ಗಂಭೀರತೆಯೆಷ್ಟೊಂದು ಮುಗ್ಧ.... ಮನೆಯಂಗಳದಿ ನಿಂತಿರಲು ನೀ ನಕ್ಷತ್ರದಂತೆ        ಸೂರ್ಯ ಹೊರಟ ಕೆಂಪಾಗಿ ಇಳೆಯ ಕರೆಯಂತೆ ನಗುತಿರೆ ನೀ ಅಮ್ಮ ತೋರಿದ ಚಂದ್ರನಂತೆ           ತಂಪಾಗಿ ಬೀಸುತಿಹುದು ಗಾಳಿ ಮಾಘದ ಬೆಳಗಿನಂತೆ