Posts

Showing posts with the label Reality

ಆದ್ಯತೆ ( priority )

Image
" ಸಮಯ ಬದಲಾದ ಹಾಗೆ ನಮ್ಮ ಆದ್ಯತೆ , ವ್ಯಕ್ತಿತ್ವ ಕೂಡ ಬದಲಾಗುತ್ತದೆ".  ತುಂಬಾ ಆತ್ಮೀಯವಾಗಿರುವವರಿಂದ ಈ ಮಾತನ್ನು ಕೇಳಿ ಯೋಚಿಸುವಂತಾಯಿತು. ಮೇಲ್ನೋಟಕ್ಕೆ  ಇದು ಎಷ್ಟು ಸತ್ಯವಾಗಿದೆ ಎಂದೆನಿಸುವುದು ಸಹಜವೇ ಸರಿ.. ಈ ಮಾತಿನ ಬಗ್ಗೆ ಅಭಿಪ್ರಾಯ ಬರೆಯುತ್ತಿರುವೆ.. ನಾನೇನು  ಜೀವನವನ್ನು ನೋಡಿದವನೋ ಅಥವಾ ಬಹಳಷ್ಟು ಏರಿಳಿತದ ದಾರಿಯಲ್ಲಿ ನಡೆದವನೋ ಅಲ್ಲವೇ ಅಲ್ಲ...ಸಹಜವಾದ ತೊಂದರೆಗಳಿಂದ ಕೂಡಿದ ಸಾಮಾನ್ಯ ಬಾಳಿನವನು.. ಆದರೆ ಯೋಚನೆಗೆ,ಯೋಚಿಸುವುದಕ್ಕೆ ಅನುಭವವಾಗಬೇಕಿಲ್ಲ. ಯೋಚನೆಯಿಂದಾಗಿಯೇ ಎಲ್ಲವನ್ನೂ ಅರಿತುಕೊಳ್ಳಲು ಅವಕಾಶವಿದೆ. ವಿಷಯಕ್ಕೆ ಬರೋಣ.. ನನ್ನ ಮೊದಲ ಪ್ರಶ್ನೆಯೇನೆಂದರೆ                  ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಜೀವನದ ಎಲ್ಲಿಯವರೆಗೆ ಬದಲಾಯಿಸಿಕೊಳ್ಳುತ್ತಾ ಹೋಗಬಹುದು? ಸಮಯವಂತೂ ಪ್ರತಿಕ್ಷಣ ಬದಲಾಗುವುದೆಂದು ತಿಳಿದದ್ದೇ.....              ನನ್ನ ಪ್ರಕಾರ ಸಮಯಕ್ಕೆ ತಕ್ಕಂತೆ ನಮ್ಮ ಆದ್ಯತೆಗಳಿಗೋಸ್ಕರ ನಮ್ಮನ್ನೇ ನಾವು ಬದಲಾಯಿಸಿಕೊಳ್ಳುತ್ತಾ ಹೋಗುವುದಕ್ಕಿಂತ, ಬಂದ ಸಮಯಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದನ್ನು ಕಲಿತುಕೊಳ್ಳಬೇಕು.. "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು" ಅಂತಾರಲ್ವಾ.... ತಿಳಿದಿದೆ... ಯಾವ್ಯಾವುದು ಸಾಧ್ಯಾಸಾಧ್ಯಗಳೆಂಬುದು. ಆದರೆ ನಮ್ಮ ಆದ್ಯ...

ಆತ್ಮತತ್ವ

Selfishness is far better than self lessness... ಕೆಲವೊಮ್ಮೆ ಜೀವನ ಬೇಸರವಾಗಿಬಿಡುತ್ತದೆ.. ಜೀವ ಚೈತನ್ಯ ಕಳೆದುಕೊಂಡು ಕಂಗೆಟ್ಟಾಗ ಅದನ್ನು ಮರಳಿಸಲು ಸಾಧ್ಯವಿರುವುದು ನಾವು ಕಂಡ ಆಶಾದಾಯಕ ಕನಸುಗಳಿಗೆ ಮಾತ್ರ... ವ್ಯರ್ಥವಾಗಿ ನಿಮ್ಮ ಸ್ವಂತ ಸಮಯವನ್ನು ಬೇರೆಯವರಿಗಾಗಿ ವ್ಯಯಿಸುವುದನ್ನು  ಬಿಟ್ಟುಬಿಡಿ... ಸಂಬಂಧಿಗಳಾದರೂ ಸರಿ, ಸ್ನೇಹಿತರಾದರೂ ಸರಿ ಯಾರು ನಮ್ಮ ಖುಷಿಗೆ ಅಡ್ಡವಾಗಿರುತ್ತಾರೋ ಅವರನ್ನು ದಾಟಿ ಮುಂದೆ ಹೋಗುವುದೇ ಸರಿಯಾಗಿರುತ್ತದೆ... ಆದಕಾರಣ ಸಮಯವನ್ನು ನಿಮ್ಮ ಜೀವನದ ಮೇಲೆಯೇ ಖರ್ಚು ಮಾಡಿ..ಅದು ಅಮೂರ್ತ ಅನುಭವಗಳನ್ನು ಒದಗಿಸುವಲ್ಲಿ ವರ್ತಮಾನದಲ್ಲಿ ಉಪಯೋಗವಾಗದಿದ್ದರೂ ವಿಫಲವಂತೂ ಆಗಲಾರದು..  ಕನಸುಗಳು ಚೈತನ್ಯವನ್ನು ಮರಳಿಸುತ್ತದೆ ಎಂಬುದಕ್ಕೆ ಕಾರಣಗಳು ಹೀಗಿವೆ.. ~• ನಿಮ್ಮ ಪ್ರಯತ್ನವೊಂದಿದ್ದರೆ ಅದು ಎಂದಿಗೂ ನಿಮ್ಮನ್ನು ನಿರಾಸೆ ಗೊಳಿಸಲಾರದು. ~• ಪ್ರತಿದಿನದ ಮುಂಜಾನೆಯಲ್ಲಿ ನವನವೀನ ಕಲ್ಪನೆಗಳು ನಮ್ಮ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತದೆ. ~• ಸಾಗಿಬಂದ ತಪ್ಪಾದ ದಾರಿಯನ್ನೋ ಅಥವಾ ಮೂರ್ಖರಾಗಿ ಆರಿಸಿ ಕೊಂಡದ್ದನ್ನೋ ಮರೆಸಿ ಹೊಸದಾದ ಸಂತಸ ನೀಡುವ ನಿಖರ ಗುರಿಯೆಡೆಗೆ ನಮ್ಮನ್ನು ಎಳೆಯುತ್ತದೆ‌.. ~• ಜೀವನದಲ್ಲಿ ಕಳೆದುಕೊಂಡ ವಿಶ್ವಾಸ ಹಾಗು ನಂಬಿಕೆಗಳು ಪುನಃ ಚಿಗುರಲು ನೀರುಣಿಸುತ್ತದೆ. ನಮ್ಮನ್ನು ನಾವು ಅರ್ಥೈಸಿಕೊಂಡಾದಮೇಲೆ ಇತರರನ್ನು ಅರ್ಥೈಸಿಕೊಳ್ಳಲು ಹೊರಟರೆ ಉತ್ತಮ. ಏಕೆಂದರೆ ಖಾಲಿ ಇರು...

ಕುರುಡು ಮನ

ಅಳಬೇಕೋ, ನಗಬೇಕೋ, ಕ್ರೋಧಗೊಳ್ಳಬೇಕೋ, ವಿಷಾದದಿಂದ ಪರಿಸ್ಥಿತಿಯನ್ನು ಹಳಿಯಬೇಕೋ ಏನೂ ತಿಳಿಯುತ್ತಿಲ್ಲ.. ಎಷ್ಟು ನಿಸ್ಸಹಾಯಕ ಪರಿಸ್ಥಿತಿ.. ಈ ಅಸಹಾಯಕತೆಯ ದುಃಖವು ಮನಸ್ಸಿನ ನೋವಾಗಿ ಕಣ್ಣಹನಿ ರೂಪವನ್ನು ಪಡೆಯುತ್ತಿದೆ ಎನಿಸುತ್ತಿದೆ..     ನಾನು ನನ್ನನ್ನು ಪ್ರಶ್ನಿಸಿಕೊಳ್ಳಬೇಕೋ, ಅಥವಾ ಸರಿ ಯಾವುದೆಂದು ಇತರರನ್ನು ಒಟ್ಟುಗೂಡಿಸಿ ವಾದ ಮಾಡಬೇಕೋ...  ಹೀನಾಯ ಪರಿಸ್ಥಿತಿಯು ಕಣ್ಣಮುಂದೆಯೇ ನಡೆಯುತ್ತಿರುವುದನ್ನು ನೋಡುತ್ತಿದ್ದರು ಸುಮ್ಮನಾಗಿರುವಂತಾಗಿದೆಯಲ್ಲಾ... ಎಂತಹ ಪಾಪದ ಜನ್ಮವಿದು...      ಒಬ್ಬರಿಗೊಬ್ಬರು ಮಿಡಿಯುವಂತಹ ಸ್ನೇಹವಿಲ್ಲ.. ಇಬ್ಬರು ಒಂದಾಗುವಂತಹ ಪ್ರೀತಿಯಂತೂ ಇಲ್ಲವೇ ಇಲ್ಲ.. ಶುದ್ಧವಾದ ಸಹಜ ಗೆಳೆತನ ವಷ್ಟೇ... ಆದರೆ ಗೆಳತಿಯ ಬಗೆಗಿನ ಅಸಹ್ಯವಾದ ಮಾತುಗಳಿಗಾಗಿ ಮನವು ಇಂದೇಕೋ ವಿಚಲಿತಗೊಂಡು ನಿಂತಿದೆ..    ಗಂಡು ಜನ್ಮ ಪಡೆದು ಯುವಕನಾದ ಮಾತ್ರಕ್ಕೆ ಅನ್ಯ ಸ್ತ್ರೀಯ ಬಗೆಗಿನ ನಮ್ಮ ದೃಷ್ಟಿ ಏಕೆ ನಮ್ಮ ಆಪ್ತರ ಮೇಲಿನ ದೃಷ್ಟಿಗಿಂತ ಭಿನ್ನವಾಗಿ ಬಿಡುವುದು?? ಅವರೇನು ತಪ್ಪೆಸಗಿದರು? ಯಾರೊಬ್ಬರೂ ತಮ್ಮ ದೇಹದ ಸ್ವಯಂ ನಿರ್ಮಾತೃ ಗಳೇನಲ್ಲ. ಪ್ರತಿಯೊಬ್ಬರ ಶರೀರವು ಭಿನ್ನವಾಗಿ ದೇವರಿಂದ ಕೊಡಲ್ಪಟ್ಟಿದ್ದೇ ಆಗಿರುತ್ತದೆ. ಇವುಗಳ ಅರಿವಿದ್ದರೂ ಅಸಹ್ಯವಾಗಿ ,ಅಸಭ್ಯವಾಗಿ ಅವಳ ದೇಹದ ಅಂಗಾಂಗಗಳ ವಿವರಣೆಯ ಅಗತ್ಯವೇನು? ಅವಳು ಇರುವಲ್ಲಿ ನಿಮ್ಮ ಅಮ್ಮನೋ ಸಹೋದರಿಯನ್ನೋ ಅಥವಾ ನಿಮ್ಮ...

ತೃಪ್ತ ಪ್ರಾರ್ಥನೆ

ಮನುಷ್ಯನನ್ನು ಮನುಷ್ಯತ್ವ ಜಾತಿಯಿಂದ ಅಳೆದರೂ ಅಷ್ಟೇ... ಅವನ ಪ್ರಾರ್ಥನೆಯ ಬಹುಪಾಲು ಸ್ವಂತಕ್ಕಾಗಿಯೇ ಇರುತ್ತದೆ. ದೇವಾಲಯ, ಚರ್ಚ್ ಮಸೀದಿಗಳಲ್ಲಾಗಲಿ ದೇವರು ಪಡೆಯುವ ಪ್ರಾರ್ಥನೆಗಳು ವ್ಯಕ್ತಿಯ ಸ್ವಂತ, ಪರ ಅಥವಾ ಬಹು ಉದಾರವೆಂದರೆ ಲೋಕಕ್ಕಾಗಿಯಾಗಿರುತ್ತದೆಯಲ್ಲವೇ?                                             ಈಗ ನನ್ನ ಮಾತೇನೆಂದರೆ, ಧರ್ಮಗ್ರಂಥಗಳ ಪ್ರಕಾರ ದೇವರು ಒಬ್ಬ ಅಸಾಧಾರಣ, ಅತಿ ಶಕ್ತಿಯುತ ಹಾಗೂ ತೇಜೋಮಯ ಮನುಷ್ಯರೂಪದವನಾಗಿರುತ್ತಾನೆ. ಎಲ್ಲಾ ಗ್ರಂಥಗಳಲ್ಲಿ ತಿಳಿಸಿರುವ ಹಾಗೆ ದೇವತಾ ರೂಪವಾದರೂ ಕಷ್ಟವನ್ನು ಅನುಭವಿಸಲೇಬೇಕು. ಕರ್ಮಫಲವಾದದ್ದು ಪ್ರತಿಯೊಬ್ಬರಿಗೂ ಇದ್ದೇ ಇರುತ್ತದೆ ಎಂದಾಗಿದೆ.                     ಹೀಗಿರುವಾಗ ನನಗೆ ಚಿಂತೆಯೊಂದು ಬಂದೊದಗಿತ್ತು. ನಮ್ಮ ಪ್ರಾರ್ಥನೆಗಳೇಕೆ ನಾವು ತೃಪ್ತವಾಗಿದ್ದೇವೆ ಎಂದಿರಬಾರದು? ಮನುಷ್ಯ ಸಮಾಜದಲ್ಲಿ ಸ್ವಾಭಿಮಾನಕ್ಕಾಗಿಯೋ ಇತರ ಯಾವುದೇ ಕಾರಣಕ್ಕಾಗಿಯೋ ತಲೆತಗ್ಗಿಸಿದ ನಾವು ನಮ್ಮ ಕಷ್ಟಗಳನ್ನು ಸ್ವತಃ ನಾವೇ ಅನುಭವಿಸಬೇಕಾದ ಸಂದರ್ಭ ಬಂದೊದಗಿದಾಗ ದೇವರ ಸಹಾಯಕ್ಕಾಗಿ ಪ್ರಾರ್ಥಿಸ ತೊಡಗುವುದು ಎಷ್ಟು ಸರಿಯಾದೀತು? ದೇವನೇ ಮನುಷ್ಯನ ಸೃಷ್ಟಿಕರ್ತೃನಾಗಿದ್ದಾನೆ. ಆದ್ದರಿಂದ...

ನಗುವರಿಯದ ಮುಖ..

ಹೊಸ ಜಗತ್ತಿನಲ್ಲಿ ನವನವೀನ ಶೋಕಿಗಳು ಹೆಚ್ಚಾಗುತ್ತಿವೆಯೇ ವಿನಃ ಧರ್ಮ ಹಾಗೂ ಸಂಸ್ಕೃತಿಯ ಬಗೆಗಿನ ನಿಷ್ಠೆಯಲ್ಲ. ಗಿಡ ಬೆಳೆಸಬೇಕಾಗಿದ ಕೈಗಳು ನೀರುಣಿಸಿ ಪೋಷಿಸುವುದನ್ನು ಮರೆತಿವೆಯೋ ಅಥವಾ ಎಲ್ಲವೂ ಅತಿಯಾಗಿ ಗಿಡಕ್ಕೆ ಕೊಳೆ ಬರುತ್ತಿದೆಯೋ ಎಂದು ತಿಳಿಯದು. ನದಿಯಾಗಬೇಕಾದ ನೀರಿನ ಚಿಲುಮೆಯನ್ನು ತಡೆಯಲೆತ್ನಿಸುವುದು ಮತ್ತು ಕಲುಷಿತಗೊಳಿಸುವುದು ಸುತ್ತಲಿನ ಎಲ್ಲರಿಗೂ ಅಪಾಯ ತರುವಂತದ್ದು. ಹಾಗೆಯೇ ಮನಸ್ಸು ಕೂಡ ಹುಟ್ಟಿನಲ್ಲಿ ಶುದ್ಧವಾಗಿದ್ದು ಪ್ರಪಂಚದ ಸಂಪರ್ಕಕ್ಕೆ ಬಂದು ಬಾಲ್ಯದಿಂದ ಸಂಸ್ಕಾರ ಮರೆತು ಅಥವಾ ಸಿಗದೇ ಕೊಚ್ಚೆಗೆ ಸಮವಾಗಿ ಬೇಡ ಬೇಕುಗಳ ಮಿಶ್ರಣವಾಗಿ ನಾರುತ್ತಾ ದುಷ್ಪರಿಣಾಮವನ್ನೇ ಉಂಟುಮಾಡುತ್ತದೆ. ಜಗತ್ತಿನ ಭವಿಷ್ಯವಿರುವುದು ಇಂದು ಬೆಳೆಯುತ್ತಿರುವ ಹಾಗೂ ಅವರನ್ನು ಬೆಳೆಸುತ್ತಿರುವ ಮನಸ್ಸುಗಳ ಅಡಿಪಾಯದ ಮೇಲೆ. ತಿದ್ದುವವರು ತಪ್ಪನ್ನು ತಿದ್ದಿದರೆ ತಾನೇ ತಪ್ಪಾದದ್ದು ಸರಿಯಾಗುವುದು? ಬೇಕೆಂದೇ ಸರಿಯನ್ನು ತಪ್ಪೆಂದು ತಿದ್ದುವ ಮನಸ್ಸುಗಳು ಇರಬಾರದಷ್ಟೇ.... ಶಿಲ್ಪಿಯು ಜಾಗರೂಕತೆ ವಹಿಸಿದಷ್ಟು ಮತ್ತು ನಿಪುಣನಾದಷ್ಟು ಶಿಲ್ಪವು ಸುಂದರಗೊಳ್ಳುವುದು; ಶಿಲ್ಪದ ಸೌಂದರ್ಯ ಕೆಡುವುದು ಅಜಾಗರೂಕತೆಯಿಂದಾಗಿರುತ್ತದೆ. ಪ್ರತಿದಿನದ ನಾಳೆಯ ಸಂತೋಷದ ಬಗ್ಗೆ ಚಿಂತಿಸುವ ನಾವು ದೊರೆತ ಹಾಗೂ ಪಡೆದುಕೊಳ್ಳಬೇಕಾದ ಸಂಸ್ಕಾರಗಳ  ಮತ್ತು ಸಾಗಬೇಕಾದ ಧರ್ಮದ ಮಾರ್ಗಗಳ ಬಗ್ಗೆ ಚಿಂತಿಸಲಾರೆವು. ನಗುವರಿಯದ ಮುಖಕ್ಕೆ ಕಾರಣವಾಗಿರುವಂತದ್ದು ಧರ್ಮ ಮ...

ಸಮಯ ಸಮಸ್ಯೆ?

ಸಮಸ್ಯೆಗಳಿಲ್ಲದ ಬದುಕ ಬದುಕುವುದು ಯೋಗ್ಯವೆನಿಸಲ್ಲ. ಬದುಕ ಬಾಳಲಿಕ್ಕಾಗುವುದು ಸಮಸ್ಯೆಗಳಿಲ್ಲವೆಂದರೆ ಮಾತ್ರವಲ್ಲ. ಮನುಷ್ಯ ಜೀವನದ ಮುಂದಿನ ದಾರಿ ಕಾಣುವುದು ಸಮಸ್ಯೆಗಳ ಬೆಳಕಿನಲ್ಲಿ. ಜೀವನ ಪ್ರಯಾಣ ಸುಖವಾಗುವುದು ಸಮಸ್ಯೆಗಳ ಸೂರಿನಡಿಯಲ್ಲಿ. ಒಮ್ಮೆ ನಗು ಮರೆತ ಮಾತ್ರಕ್ಕೆ ಅಳುವೆ ಜೀವನವೆಂದು ಯೋಚಿಸುವುದಲ್ಲ.  ಕಷ್ಟಗಳಿಗೆ ಸಮಯವನ್ನು ಹಳಿಯಲಾಗದು ಯಾಕೆಂದರೆ ಸಮಯವು ಕಷ್ಟಗಳಿಗಷ್ಟೇ ಸೀಮಿತವಾಗಿ ಉಳಿದಿಲ್ಲ ಸಮಯವು ಕಷ್ಟಗಳಿಗೆ ಕಾರಣವೂ ಅಲ್ಲ,ಕಾರಣವಾಗಿಯೂ ಇರಲಾರದು. ಉದ್ಭವಿಸುವ ಸಂದರ್ಭಗಳು ಯೋಚನೆಯನ್ನು ಬದಲಾಯಿಸಿ ಸಮಯವನ್ನು ಕಷ್ಟ ವೆನ್ನುವ ಮೂರ್ಖನನ್ನಾಗಿಸುತ್ತವೆ. ಮೂರ್ಖರಾದವರು ಜೀವನದ ಸಮಯವನ್ನೆಲ್ಲ ವ್ಯಯಿಸುತ್ತಾರೆ ಕಷ್ಟವೆಂದು ತಿಳಿದು;ಯಾಕೆಂದರೆ ಅವರಿಗೆ ತಿಳಿಯದು ಬದಲಾಗಿರುವುದು ಉದ್ಭವಿಸಿದ ಸಂದರ್ಭಗಳಿಂದ ಬದಲಾದ ಯೋಚನೆಗಳಾಗಿವೆಯೇ ಹೊರತು ಸಮಯವಲ್ಲವೆಂದು.. ಖುಷಿಯಾಗಿರುವವನು ಆತನೊಬ್ಬನೇ ಆಗಿರುವನು ಅವನು ಜ್ಞಾನಿ. ಸಮಯ ಕಷ್ಟವಾಗದೇ ಇರುವುದು, ಕಷ್ಟದ ಸಮಯಗಳು ಬರದೇ ಇರುವುದು ಆತನೊಬ್ಬನಿಗೇ.. ಮನಸ್ಸು ಸ್ಥಿರವಾಗಿರುವಾಗ ಆತನ ಯೋಚನೆಗಳು ಬದಲಾಗಲಾರವು. ಬದಲಾಗದ ಯೋಚನೆಗಳು ಕಷ್ಟಗಳ ಮತ್ತು ಚಿಂತೆಗಳ ಬಗ್ಗೆ ಚಿಂತಿಸಲಾರವು. ಅವು ನಿತ್ಯವಾಗಿರುವ,ಸಾವಿಲ್ಲದ, ಹುಟ್ಟಿರದ ಆನಂದವನ್ನು ಪಡೆಯುವ ಸಾಧನೆಯಲ್ಲಿ ದೊರಕುವವು.