Posts

Showing posts from March, 2021

ಆದ್ಯತೆ ( priority )

Image
" ಸಮಯ ಬದಲಾದ ಹಾಗೆ ನಮ್ಮ ಆದ್ಯತೆ , ವ್ಯಕ್ತಿತ್ವ ಕೂಡ ಬದಲಾಗುತ್ತದೆ".  ತುಂಬಾ ಆತ್ಮೀಯವಾಗಿರುವವರಿಂದ ಈ ಮಾತನ್ನು ಕೇಳಿ ಯೋಚಿಸುವಂತಾಯಿತು. ಮೇಲ್ನೋಟಕ್ಕೆ  ಇದು ಎಷ್ಟು ಸತ್ಯವಾಗಿದೆ ಎಂದೆನಿಸುವುದು ಸಹಜವೇ ಸರಿ.. ಈ ಮಾತಿನ ಬಗ್ಗೆ ಅಭಿಪ್ರಾಯ ಬರೆಯುತ್ತಿರುವೆ.. ನಾನೇನು  ಜೀವನವನ್ನು ನೋಡಿದವನೋ ಅಥವಾ ಬಹಳಷ್ಟು ಏರಿಳಿತದ ದಾರಿಯಲ್ಲಿ ನಡೆದವನೋ ಅಲ್ಲವೇ ಅಲ್ಲ...ಸಹಜವಾದ ತೊಂದರೆಗಳಿಂದ ಕೂಡಿದ ಸಾಮಾನ್ಯ ಬಾಳಿನವನು.. ಆದರೆ ಯೋಚನೆಗೆ,ಯೋಚಿಸುವುದಕ್ಕೆ ಅನುಭವವಾಗಬೇಕಿಲ್ಲ. ಯೋಚನೆಯಿಂದಾಗಿಯೇ ಎಲ್ಲವನ್ನೂ ಅರಿತುಕೊಳ್ಳಲು ಅವಕಾಶವಿದೆ. ವಿಷಯಕ್ಕೆ ಬರೋಣ.. ನನ್ನ ಮೊದಲ ಪ್ರಶ್ನೆಯೇನೆಂದರೆ                  ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಜೀವನದ ಎಲ್ಲಿಯವರೆಗೆ ಬದಲಾಯಿಸಿಕೊಳ್ಳುತ್ತಾ ಹೋಗಬಹುದು? ಸಮಯವಂತೂ ಪ್ರತಿಕ್ಷಣ ಬದಲಾಗುವುದೆಂದು ತಿಳಿದದ್ದೇ.....              ನನ್ನ ಪ್ರಕಾರ ಸಮಯಕ್ಕೆ ತಕ್ಕಂತೆ ನಮ್ಮ ಆದ್ಯತೆಗಳಿಗೋಸ್ಕರ ನಮ್ಮನ್ನೇ ನಾವು ಬದಲಾಯಿಸಿಕೊಳ್ಳುತ್ತಾ ಹೋಗುವುದಕ್ಕಿಂತ, ಬಂದ ಸಮಯಕ್ಕೆ ತಕ್ಕಂತೆ ಹೊಂದಿಕೊಂಡು ಹೋಗುವುದನ್ನು ಕಲಿತುಕೊಳ್ಳಬೇಕು.. "ಬೀಸೋ ದೊಣ್ಣೆಯಿಂದ ತಪ್ಪಿಸಿಕೊಂಡರೆ ನೂರು ವರುಷ ಆಯಸ್ಸು" ಅಂತಾರಲ್ವಾ.... ತಿಳಿದಿದೆ... ಯಾವ್ಯಾವುದು ಸಾಧ್ಯಾಸಾಧ್ಯಗಳೆಂಬುದು. ಆದರೆ ನಮ್ಮ ಆದ್ಯತೆಯನ್ನು ಬದಲಾಯಿಸುತ್ತಾ ವ್ಯಕ್ತಿತ್ವವನ್ನೇ ಬದಲಾಯಿಸಿಕೊಳ್ಳುವುದು ಅನಿವಾರ್ಯವಲ್ಲ.. ಆದರ