ಬಿಡುವ ಮುನ್ನ ಬರವೇಕೆ?
ಮುಂದಿರುವ ಸಮಯ ಗುಟುರುಹಾಕುತ್ತ ಬಲಿಷ್ಠ ಎತ್ತಿನಂತೆ ಕಾಲ್ಕೆರೆದು ನಿಂತಿದೆ. ಅದರ ಬೆನ್ನ ಮೇಲೆ ಕಷ್ಟಗಳ ಸರಮಾಲೆಯಿದೆಯೋ.. ಸುಖದ ಮೂಟೆಯಿದೆಯೋ...? ಸಕಲವೂ ಅಸ್ಪಷ್ಟ.. ಆದರೆ ಅದು ಮುಂದಿನ ಕ್ಷಣವೇ ನನ್ನನ್ನು ಆಕ್ರಮಿಸುವುದಂತೂ ನಿಶ್ಚಿತ. ನಾನೇನು ಮೂರು ಕಾಸಿನ ಮೂರ್ಖನೆ? ಎರಡು ಕಾಸಿನ ಎಡಬಿಡಂಗಿಯೇ? ಒಂದು ಕಾಸಿನ ಆಲಿಸಿಯೇ? ಅಥವಾ ರೂಪಾಯಿಗಳಷ್ಟು ಲೆಕ್ಕಾಚಾರದ ಸದ್ಗುಣನೇ? ಉತ್ತರವಿಲ್ಲ.. ತಿಳಿದದ್ದೊಂದೇ ಅದು ನಾನು ಸೊನ್ನೆಯಂತೆ ಅನಿರ್ದಿಷ್ಟ... ಭವಿಷ್ಯದ ಯೋಜನೆಗಳ ಅಮಲು ತಲೆಗೇರಿದೆ. ಕೂಡಿಟ್ಟ ನೆನಪಿನ ಕೊಡ ಸೋರುತ್ತಿದೆ. ಕಣ್ಣಂಚಿನಿಂದ ತಪ್ಪಿಸಿಕೊಂಡ ಹನಿ ಜಾರಿ ಕೆಳಗಿಳಿಯುತ್ತಿದೆ. ಅರೇ..!! ಇದೇನು ಭಾವಾವೇಶವೋ... ಇದೇತಕ್ಕೆ ಉದ್ವೇಗವೋ.. ಜಗತ್ತಿನ ಭಾವನೆಗಳ ಭದ್ರ ನೆಲೆಗಟ್ಟಿನ ಮೇಲೆ ನಿಂತಿರುವವನು ನಾ ನೆಂದು ಪದೇಪದೇ ನೆನಪಿಸುತ್ತೆ.. ರಾತ್ರಿ ಹತ್ತುಮೂವತ್ತಾಗಿತ್ತು ಆದರೆ ಕಣ್ಣುಗಳಿಗಿನ್ನೂ ಕತ್ತಲಾಗಿರಲಿಲ್ಲ. ಬಾರದ ನಿದ್ದೆಯನ್ನು ಬಣ್ಣದ ಕನಸುಗಳು ಆವರಿಸುತ್ತಿದ್ದವು. ಆ ಕ್ಷಣಕ್ಕೆ ಸರಿಯಾಗಿ ಮುಂದೆ ಉರಿಯುತ್ತಿದ್ದ ಮಂದ ಬೆಳಕಿನ ಮೊಂಬತ್ತಿಯ ಬೆಂಕಿಯನ್ನು ಕೀಟವೊಂದು ಸುತ್ತುತ್ತಾ ರೆಕ್ಕೆ ಸುಟ್ಟುಕೊಂಡು ಕೆಳಕ್ಕೆ ಬಿದ್ದು ಕಾಲುಗಳಿಂದ ಚಲಿಸುತ್ತಾ ಮಾಯವಾಯಿತು. ಅನುಭವಿಸುತ್ತಿದ್ದ ವಾಸ...