ಮನು ಮತ್ತು ತಾತ
ದೂರದಲ್ಲಿ ಕಾಣುತ್ತಿರುವ ಮರ ರಸ್ತೆಯ ಹಿಂದಿನ ಯಾವುದೋ ತಿರುವಿನಲ್ಲಿ ಮಾಯವಾಯಿತು. ಪ್ರಯಾಣಕ್ಕೆ ಹೊರಟಿದ್ದ ಮನು ಕಿಟಕಿಯಿಂದ ತಲೆ ಹೊರಹಾಕಿ ಬೀಸುತ್ತಿದ್ದ ಗಾಳಿಯನ್ನು ಅನುಭವಿಸುತ್ತಿದ್ದ. ಮನಸ್ಸಿನೊಳಗಿರುವ ಬಹಳಷ್ಟು ಪ್ರಶ್ನೆಗಳು ಆ ಕ್ಷಣ ಅವನಿಗೆ ಜಗತ್ತನ್ನೇ ಮರೆಸಿದ್ದವು. ವಾಸ್ತವಕ್ಕೆ ಬರಲು ಬಸ್ ಕಂಡಕ್ಟರ್ ಜೋರಾಗಿ ಕೂಗಬೇಕಾಯಿತು. ಮನುವಿಗೆ ಪರೀಕ್ಷೆಗಳು ಮುಗಿದು ಈಗ ರಜೆಯ ಕಾಲ. ಬುದ್ಧಿವಂತನಲ್ಲದ ಅವನ ಓದೇ ಒಂದು ಸಾಹಸ ಕಥೆ. ಮನುಷ್ಯನಲ್ಲಿ ಒಂದು ಅಂಶದ ಕೊರತೆಯಿದ್ದರೆ ಇನ್ನೊಂದರ ಆಧಿಕ್ಯವಿರುತ್ತದೆ. ಆತ ಜೀವನದ ಪ್ರತಿ ಕ್ಷಣವನ್ನು ಅದ್ಭುತವನ್ನಾಗಿ ಅನುಭವಿಸಲು ಬಯಸಿದವ. ಹಾಗಾಗಿ ಫಲಿತಾಂಶದ ಭಯವಾಗಿ ಅದು ಪ್ರಕಟವಾಗುವ ಹೊತ್ತಿಗೆ ಒಂದು ದಿನ ಬೆಳಿಗ್ಗೆ ಆತ ಮನೆಯಿಂದ ಹೊರಟ. ಮಧ್ಯಾಹ್ನದ ವೇಳೆಗೆ ಬಸ್ಸಿನಿಂದ ಇಳಿದು ಎರಡು ಮೈಲಿ ದೂರದಲ್ಲಿರುವ ತಾತನ ಮನೆಗೆ ಕಾಲ್ನಡಿಗೆಯಲ್ಲಿ ಹೊರಡಲು ನಿಶ್ಚಯಿಸಿದ. ನಡೆಯತೊಡಗಿದಾಗ ಅಲ್ಲಲ್ಲಿ ದಾರಿಯ ಪಕ್ಕ ಗುಡಿಸಲುಗಳು ಮುರಿದುಬೀಳಲು ತಯಾರಾಗಿರುವ ಜೋಪಡಿಗಳು ಕಾಣಿಸಿದವು. ಮುನ್ನಡೆದ. ಎರಡಂತಸ್ತಿನ ಭರ್ಜರಿ ಮನೆಗಳೂ ಕಾಣಿಸಿದವು. ಅವುಗಳನ್ನೆಲ್ಲ ನೋಡುತ್ತಾ ಅಂತೂ ತಾತನ ಮನೆಯ ಬಾಗಿಲು ಬಡಿಯುವ ಹೊತ್ತಿಗೆ ಸರಿಯಾದ ಊಟದ ಸಮಯ. ದಣಿವಾದ್ದರಿಂದ ಸೋಪಸ್ಕಾರದ ಊಟವಾ...