ಅನಿಶ್ಚಿತ
ಅಮ್ಮನ ಕಾಲಿಗೆ ನಮಸ್ಕರಿಸುತ್ತಿದ್ದೆ. ಹೊರಗಿನಿಂದ ಗಡುಸಾದ ಭಾವಪೂರಿತ ಅಪ್ಪನ ಧ್ವನಿ ಕೇಳಿಸಿತು. "ಇನ್ನೂ ಎಷ್ಟು ಹೊತ್ತು... ಈಗಾಗಲೇ ಹೊರಡಲು ತಡವಾಗುತ್ತಿದೆ"... ಹೊರಗೆ ಹೋದಾಗ ಅಪ್ಪ ಕಳವಳಗೊಂಡಿದ್ದು ಕಾಣಿಸಿತು. ಆತನ ಮುಖದಲ್ಲಿ. ಅಪ್ಪ, ನಿಮಗೂ ಚಿಂತೆಯೇ... ದೂರದ ಊರಿಗೇನೋ ಹೊರಟಿರುವುದು ನಿಜ. ಆದರೆ ನಾನೇನು ಒಬ್ಬನೇ ಹೋಗುತ್ತಿಲ್ಲವಲ್ಲ. ನನ್ನ ಜೊತೆಗೆ ಗಾರ್ಗಿಯೂ ಬರುತ್ತಿದ್ದಾಳೆ. ಇಬ್ಬರೂ ಒಟ್ಟಿಗೆ ಹೋಗುತ್ತಿದ್ದೇವೆ. ಕೆಲಸಗಳಲ್ಲಿಯೂ, ರೈಲು ಹತ್ತಿ ತಿರುಗಿ ಬರುವತನಕವೂ ಇಬ್ಬರೂ ಜೊತೆಗಿರಲಿದ್ದೇವೆ. ಈ ಐದಾರು ತಿಂಗಳು ಒಬ್ಬರಿಗೊಬ್ಬರು ಸಹಾಯಕರಾಗಿರುತ್ತೇವೆ. ನಿನ್ನೆ ಮಾತ್ರ ಇದೆಲ್ಲವನ್ನೂ ಹೇಳಿದ್ದೇನಲ್ಲವೇ... ಹಾಗಿದ್ದರೂ ಆತಂಕವೇಕೆ... ಎಲ್ಲವೂ ಸುಗಮವಾಗಿಯೇ ಮುಗಿಯುತ್ತದೆ. ಹೋಗಿ ಬರುತ್ತೇನೆ ಆಶೀರ್ವದಿಸಿ ಎಂದಾಗ ತಲೆಯ ಮೇಲೆ ಕೈಯಾಡಿಸಿದರು. ಹಿಂದಿನಿಂದ ಅಮ್ಮ, 'ಅವಳು ಹೆಣ್ಣು ಮಗಳು. ನೀನು ಒರಟ. ಅವಳ ಮನಸ್ಸನ್ನು ನೋಯಿಸಬೇಡ. ಸಮಯ ಮಾಡಿಕೊಂಡು ಆಗಾಗ ಕರೆ ಮಾಡುತ್ತಿರಿ. ಪ್ರಯಾಣ ಸುಖಕರವಾಗಿರಲಿ, ಕ್ಷೇಮವಾಗಿ ಹಿಂತಿರುಗಿ' ಎಂದ ಅವಳ ಮಾತುಗಳೊಂದಿಗೆ ಅಪ್ಪನ ಅಂತರಾಳವು ಸೇರಿರುವುದನ್ನು ಅವನ ಕಣ್ಣುಗಳಿಂದ ಗೊತ್ತುಮಾಡಿಕೊಂಡೆ. ಹೊರಗೆ ಬಂದೆ. ಬಾಡಿಗೆಗೆ ಹೇಳಿ ತರಿಸಿದ್ದ ಕಾರು ನಿಂತಿತ್ತು. ನನ್ನ ಐದಾರು ತಿಂಗಳ ಪ್ರಯಾಣದ ಲಗೇಜುಗಳನ್ನು ಅದಕ್ಕೆ ತುಂಬಿ ಒಲ್ಲದ ಮನಸ್ಸಿನಿಂದ ನನ್ನನ್ನು ಬಿಳ್ಕೊಟ್ಟರು. ಆಗಿನ...