ಆತ್ಮತತ್ವ
Selfishness is far better than self lessness... ಕೆಲವೊಮ್ಮೆ ಜೀವನ ಬೇಸರವಾಗಿಬಿಡುತ್ತದೆ.. ಜೀವ ಚೈತನ್ಯ ಕಳೆದುಕೊಂಡು ಕಂಗೆಟ್ಟಾಗ ಅದನ್ನು ಮರಳಿಸಲು ಸಾಧ್ಯವಿರುವುದು ನಾವು ಕಂಡ ಆಶಾದಾಯಕ ಕನಸುಗಳಿಗೆ ಮಾತ್ರ... ವ್ಯರ್ಥವಾಗಿ ನಿಮ್ಮ ಸ್ವಂತ ಸಮಯವನ್ನು ಬೇರೆಯವರಿಗಾಗಿ ವ್ಯಯಿಸುವುದನ್ನು ಬಿಟ್ಟುಬಿಡಿ... ಸಂಬಂಧಿಗಳಾದರೂ ಸರಿ, ಸ್ನೇಹಿತರಾದರೂ ಸರಿ ಯಾರು ನಮ್ಮ ಖುಷಿಗೆ ಅಡ್ಡವಾಗಿರುತ್ತಾರೋ ಅವರನ್ನು ದಾಟಿ ಮುಂದೆ ಹೋಗುವುದೇ ಸರಿಯಾಗಿರುತ್ತದೆ... ಆದಕಾರಣ ಸಮಯವನ್ನು ನಿಮ್ಮ ಜೀವನದ ಮೇಲೆಯೇ ಖರ್ಚು ಮಾಡಿ..ಅದು ಅಮೂರ್ತ ಅನುಭವಗಳನ್ನು ಒದಗಿಸುವಲ್ಲಿ ವರ್ತಮಾನದಲ್ಲಿ ಉಪಯೋಗವಾಗದಿದ್ದರೂ ವಿಫಲವಂತೂ ಆಗಲಾರದು.. ಕನಸುಗಳು ಚೈತನ್ಯವನ್ನು ಮರಳಿಸುತ್ತದೆ ಎಂಬುದಕ್ಕೆ ಕಾರಣಗಳು ಹೀಗಿವೆ.. ~• ನಿಮ್ಮ ಪ್ರಯತ್ನವೊಂದಿದ್ದರೆ ಅದು ಎಂದಿಗೂ ನಿಮ್ಮನ್ನು ನಿರಾಸೆ ಗೊಳಿಸಲಾರದು. ~• ಪ್ರತಿದಿನದ ಮುಂಜಾನೆಯಲ್ಲಿ ನವನವೀನ ಕಲ್ಪನೆಗಳು ನಮ್ಮ ಮನಸ್ಸಿನಲ್ಲಿ ಮೂಡುವಂತೆ ಮಾಡುತ್ತದೆ. ~• ಸಾಗಿಬಂದ ತಪ್ಪಾದ ದಾರಿಯನ್ನೋ ಅಥವಾ ಮೂರ್ಖರಾಗಿ ಆರಿಸಿ ಕೊಂಡದ್ದನ್ನೋ ಮರೆಸಿ ಹೊಸದಾದ ಸಂತಸ ನೀಡುವ ನಿಖರ ಗುರಿಯೆಡೆಗೆ ನಮ್ಮನ್ನು ಎಳೆಯುತ್ತದೆ.. ~• ಜೀವನದಲ್ಲಿ ಕಳೆದುಕೊಂಡ ವಿಶ್ವಾಸ ಹಾಗು ನಂಬಿಕೆಗಳು ಪುನಃ ಚಿಗುರಲು ನೀರುಣಿಸುತ್ತದೆ. ನಮ್ಮನ್ನು ನಾವು ಅರ್ಥೈಸಿಕೊಂಡಾದಮೇಲೆ ಇತರರನ್ನು ಅರ್ಥೈಸಿಕೊಳ್ಳಲು ಹೊರಟರೆ ಉತ್ತಮ. ಏಕೆಂದರೆ ಖಾಲಿ ಇರು...