Posts

Showing posts from August, 2022

ಅಮ್ಮ

ಮನದ ಮೊದಲ ಬರದ ಮಾತಿಗೆ ನಿನ್ನ ಧ್ವನಿಯ ಸ್ಪರ್ಶ ಸಾಲದೆ? ನಗುವ ಮರೆತ ನನ್ನ ನೆನಪಿಗೆ ಅಳುವ ಮರೆಸಲು ನೀನೆ ಬರುವೆಯೇನಮ್ಮಾ? ನಡೆವ ನಾಳೆಗೆ ಹೆಜ್ಜೆಯಾಗಿಹೆ ಕಳೆದ ನಿನ್ನೆಗೆ ಕಾವಲಾಗಿಹೆ ನುಡಿಯೊ ಇಂದಿಗೆ ಧ್ವನಿಯು ನೀನಿರೆ ನಿನ್ನ ಕಾಲ ತೊಟ್ಟಿಲ ಮೀನು ನಾನಮ್ಮ..... ದುಃಖ ಸುರಿಸೋ ಮನೆಯ ಮಾಳಿಗೆ ಹಸಿವ ನೆನೆಸೋ ಕೈಯ ಜೋಳಿಗೆ ಬದುಕ ತೋರಿಸೋ ಬೆಂಕಿ ದೀವಿಗೆ ಕಂಪು ಮರೆತ ದುಂಡು ಮಲ್ಲಿಗೆಯೊಳು ನೀನಿರುವೆಯಮ್ಮಾ..... ರಾತ್ರಿ ಬೆಳಕು ನಿನ್ನ ರಾಗವು  ಮಳೆಯ ಬಿಸಿಲು ನಿನ್ನ ಕೋಪವು  ಎಂದೋ ಮುಗಿದ ಸ್ವಂತ ಇಚ್ಛೆಯು  ಮೌನವಾದ ನಿನ್ನ ಕತೆಯ ಸೊಗಸು ಏನಮ್ಮ!!!......

ಮರುಳು ಜೀವನ

ಅದೊಂದು ಸಾಮಾನ್ಯವಾದ ಹಳ್ಳಿ. ಅದರ ಮಧ್ಯದಲ್ಲೊಂದು ಗುಡಿ. ನಗರದಿಂದ ಬಹು ದೂರದಲ್ಲಿದೆ. ಅಲ್ಲಿನ ಜನರು ಕೃಷಿಯನ್ನು ಅವಲಂಬಿಸಿ ಬದುಕು ಕಟ್ಟಿಕೊಂಡವರು. ಅವರಿಗೆ ವಿದ್ಯೆಯ ಪರಿಚಯವಿಲ್ಲ. ಬಹಳ ಮುಗ್ಧರು.              ಹಳ್ಳಿಯ ಅಂಚಿನಲ್ಲೊಂದು ನದಿ ಹರಿಯುತ್ತದೆ. ಅದರ ತೀರದಲ್ಲಿಯೇ ಗುಡಿಸಲು ಎನ್ನಬಹುದಾದ ಒಂದು ಮನೆ ಇದೆ.  ಅದು ಬದ್ರಿ ಎನ್ನುವ ವಯಸ್ಕ ಸನ್ಯಾಸಿ ಮತ್ತು ಹೊನ್ನ ಎನ್ನುವ ಆತನ ಎಳೆಯ ಶಿಷ್ಯನ ಮನೆ. ಅಲ್ಲಿಗೆ ಬಹಳ ಜನರ ಓಡಾಟವಿರಲಾರದು. ಸ್ವಲ್ಪ ವರ್ಷಗಳಿಂದ ಈಚೆಗೆ ಅವರಿಗಿರುವುದು ಬರಿಯ ಸಣ್ಣ ಮಕ್ಕಳ ಒಡನಾಟ ಮಾತ್ರ.ಬಡವರಾದ ಹಳ್ಳಿಯ ಜನರು ಅಕ್ಷರಗಳ ಅಭ್ಯಾಸಕ್ಕೆಂದು ಮಕ್ಕಳನ್ನು ಆತನಲ್ಲಿಗೆ ಕಳುಹಿಸುತ್ತಿದ್ದರು. ಬರುವ ಐದಾರು ಮಕ್ಕಳಿಗೆ ಮನೆಯ ಮುಂದಿರುವ ಮಾವಿನ ಮರದ ಕೆಳಗೆ ಪಾಠ ಮಾಡುತ್ತಿದ್ದ. ಆತನ ಊಟ ಉಪಚಾರಕ್ಕೆಂದು ಹಳ್ಳಿಗರು ತಾವು ಬೆಳೆದ ಧಾನ್ಯಗಳನ್ನೋ ತರಕಾರಿಯನ್ನೋ ಗುರುಕಾಣಿಕೆಯ ರೂಪದಲ್ಲಿ ನೀಡುತ್ತಿದ್ದರು. ಆತ ಭಿಕ್ಷೆಯ ರೂಪದಲ್ಲಿ ಸ್ವೀಕರಿಸುತ್ತಿದ್ದ. ವಿಶೇಷ ಸಂದರ್ಭಗಳಲ್ಲಿ ಆತನಿಗೆ ಹಳ್ಳಿಯೊಳಗೆ ಆಹ್ವಾನ ದೊರೆಯುತ್ತಿತ್ತು. ಹೀಗೊಮ್ಮೆ ಬದ್ರಿಗೆ ಊರಿನಿಂದ ನಾವಿಕನ ಮೂಲಕ ಜಾತ್ರೆಯ ಪೂಜೆಯನ್ನು ನೆರವೇರಿಸಲು ಕರೆ ಬಂತು. ನಾವಿಕನು ಆತನ ವೃತ್ತಿಯಲ್ಲಿ ಚತುರ. ಪ್ರತಿದಿನವೂ ಮಕ್ಕಳನ್ನು ನದಿ ದಾಟಿಸುತ್ತಿದ್ದವನು ಅವನೇ. ಗುರುಗಳು ಸಂತೋಷವಾಗಿ ಒಪ್ಪಿ ಶಿಷ್ಯನೋಡನೆ ಆತನ ದೋಣಿ ಹತ್ತಿದರು. ಜಾತ್ರೆಯ ಬೀದಿಯನ್ನು ಪ್ರವ