ಅಮ್ಮ

ಮನದ ಮೊದಲ ಬರದ ಮಾತಿಗೆ
ನಿನ್ನ ಧ್ವನಿಯ ಸ್ಪರ್ಶ ಸಾಲದೆ?
ನಗುವ ಮರೆತ ನನ್ನ ನೆನಪಿಗೆ
ಅಳುವ ಮರೆಸಲು ನೀನೆ ಬರುವೆಯೇನಮ್ಮಾ?

ನಡೆವ ನಾಳೆಗೆ ಹೆಜ್ಜೆಯಾಗಿಹೆ
ಕಳೆದ ನಿನ್ನೆಗೆ ಕಾವಲಾಗಿಹೆ
ನುಡಿಯೊ ಇಂದಿಗೆ ಧ್ವನಿಯು ನೀನಿರೆ
ನಿನ್ನ ಕಾಲ ತೊಟ್ಟಿಲ ಮೀನು ನಾನಮ್ಮ.....

ದುಃಖ ಸುರಿಸೋ ಮನೆಯ ಮಾಳಿಗೆ
ಹಸಿವ ನೆನೆಸೋ ಕೈಯ ಜೋಳಿಗೆ
ಬದುಕ ತೋರಿಸೋ ಬೆಂಕಿ ದೀವಿಗೆ
ಕಂಪು ಮರೆತ ದುಂಡು ಮಲ್ಲಿಗೆಯೊಳು ನೀನಿರುವೆಯಮ್ಮಾ.....

ರಾತ್ರಿ ಬೆಳಕು ನಿನ್ನ ರಾಗವು 
ಮಳೆಯ ಬಿಸಿಲು ನಿನ್ನ ಕೋಪವು 
ಎಂದೋ ಮುಗಿದ ಸ್ವಂತ ಇಚ್ಛೆಯು 
ಮೌನವಾದ ನಿನ್ನ ಕತೆಯ ಸೊಗಸು ಏನಮ್ಮ!!!......

Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ