Posts

Sunflower

I had dream at last night. Like a sunflower blooming among the withered flowers, like a child delighted by its mother's presence, and like a kite gliding high in the sky.  When it dawned, everything was forgotten. I hurriedly went to the library as usual. The drizzling rain outside was telling me to sleep, but the half-read book was urging me to read it. The madness of the book was more than the sleep, so I left regardless of the rain.  Even though it was time, the library was not opened yet. Meanwhile, the librarian who came cursing the rain took the keys from the bag with his wet hands and handed them to me. I went inside and started to read the book. I was drowning in the depth of the story, and the outside world was becoming dormant to me.Like a sleeping child waking up to its mother's voice, my mind, which had sunk into the story, was awakened by the sound of thunder.  It had been two-three hours since I had been surrounded by hundreds of people. I searched around, hoping

ಅನಿಶ್ಚಿತ

ಅಮ್ಮನ ಕಾಲಿಗೆ ನಮಸ್ಕರಿಸುತ್ತಿದ್ದೆ. ಹೊರಗಿನಿಂದ ಗಡುಸಾದ ಭಾವಪೂರಿತ ಅಪ್ಪನ ಧ್ವನಿ ಕೇಳಿಸಿತು. "ಇನ್ನೂ ಎಷ್ಟು ಹೊತ್ತು... ಈಗಾಗಲೇ ಹೊರಡಲು ತಡವಾಗುತ್ತಿದೆ"... ಹೊರಗೆ ಹೋದಾಗ ಅಪ್ಪ ಕಳವಳಗೊಂಡಿದ್ದು ಕಾಣಿಸಿತು. ಆತನ ಮುಖದಲ್ಲಿ. ಅಪ್ಪ, ನಿಮಗೂ ಚಿಂತೆಯೇ... ದೂರದ ಊರಿಗೇನೋ ಹೊರಟಿರುವುದು ನಿಜ. ಆದರೆ ನಾನೇನು ಒಬ್ಬನೇ ಹೋಗುತ್ತಿಲ್ಲವಲ್ಲ. ನನ್ನ ಜೊತೆಗೆ ಗಾರ್ಗಿಯೂ ಬರುತ್ತಿದ್ದಾಳೆ. ಇಬ್ಬರೂ ಒಟ್ಟಿಗೆ ಹೋಗುತ್ತಿದ್ದೇವೆ. ಕೆಲಸಗಳಲ್ಲಿಯೂ, ರೈಲು ಹತ್ತಿ ತಿರುಗಿ ಬರುವತನಕವೂ ಇಬ್ಬರೂ ಜೊತೆಗಿರಲಿದ್ದೇವೆ. ಈ ಐದಾರು ತಿಂಗಳು ಒಬ್ಬರಿಗೊಬ್ಬರು ಸಹಾಯಕರಾಗಿರುತ್ತೇವೆ. ನಿನ್ನೆ ಮಾತ್ರ ಇದೆಲ್ಲವನ್ನೂ ಹೇಳಿದ್ದೇನಲ್ಲವೇ... ಹಾಗಿದ್ದರೂ ಆತಂಕವೇಕೆ... ಎಲ್ಲವೂ ಸುಗಮವಾಗಿಯೇ ಮುಗಿಯುತ್ತದೆ. ಹೋಗಿ ಬರುತ್ತೇನೆ ಆಶೀರ್ವದಿಸಿ ಎಂದಾಗ ತಲೆಯ ಮೇಲೆ ಕೈಯಾಡಿಸಿದರು. ಹಿಂದಿನಿಂದ ಅಮ್ಮ, 'ಅವಳು ಹೆಣ್ಣು ಮಗಳು. ನೀನು ಒರಟ. ಅವಳ ಮನಸ್ಸನ್ನು ನೋಯಿಸಬೇಡ. ಸಮಯ ಮಾಡಿಕೊಂಡು ಆಗಾಗ ಕರೆ ಮಾಡುತ್ತಿರಿ. ಪ್ರಯಾಣ ಸುಖಕರವಾಗಿರಲಿ, ಕ್ಷೇಮವಾಗಿ ಹಿಂತಿರುಗಿ' ಎಂದ ಅವಳ ಮಾತುಗಳೊಂದಿಗೆ ಅಪ್ಪನ ಅಂತರಾಳವು ಸೇರಿರುವುದನ್ನು ಅವನ ಕಣ್ಣುಗಳಿಂದ ಗೊತ್ತುಮಾಡಿಕೊಂಡೆ. ಹೊರಗೆ ಬಂದೆ. ಬಾಡಿಗೆಗೆ ಹೇಳಿ ತರಿಸಿದ್ದ ಕಾರು ನಿಂತಿತ್ತು. ನನ್ನ ಐದಾರು ತಿಂಗಳ ಪ್ರಯಾಣದ ಲಗೇಜುಗಳನ್ನು ಅದಕ್ಕೆ ತುಂಬಿ ಒಲ್ಲದ ಮನಸ್ಸಿನಿಂದ ನನ್ನನ್ನು ಬಿಳ್ಕೊಟ್ಟರು. ಆಗಿನ

ಭಾವ-ಶೂನ್ಯ

ಮರೆಯಲಾಗದ ಉಸಿರು ನೀನು        ಸೇರುವೆನು ನಾನು ನಿನ್ನಲೇ.... ಎಂದು ಮುಗಿಯದ ಚಿಂತೆ ನೀನು         ಮುಳುಗುವೆನು ನಾನು ನಿನ್ನಲೇ.... ದೂರದ ಸೌಂದರ್ಯವು ನೀನು         ಸೆರೆಹಿಡಿದೆ ನಾನು ಕಣ್ಣಲ್ಲೇ.... ಅರ್ಥವಾಗದ ಬಣ್ಣದ ಚಿತ್ರವು ನೀನು         ಬಿಡಿಸಿದೆ ನಾ ಅದರ ಬಿಳಿಯ ಕುಂಚದಲೇ.. ಹಸಿರು ಚಿಗುರಿನ ಎಳಸು ಗಾಳಿಯೇ         ನಿನ್ನ ಬೀಸುವಿಕೆಯೆಷ್ಟು ಪ್ರಬುದ್ಧ.... ಮೌನ ಮುರಿಯುವ ತುಂಟ ಪ್ರಕೃತಿಯೆ         ನಿನ್ನ ಗಂಭೀರತೆಯೆಷ್ಟೊಂದು ಮುಗ್ಧ.... ಮನೆಯಂಗಳದಿ ನಿಂತಿರಲು ನೀ ನಕ್ಷತ್ರದಂತೆ        ಸೂರ್ಯ ಹೊರಟ ಕೆಂಪಾಗಿ ಇಳೆಯ ಕರೆಯಂತೆ ನಗುತಿರೆ ನೀ ಅಮ್ಮ ತೋರಿದ ಚಂದ್ರನಂತೆ           ತಂಪಾಗಿ ಬೀಸುತಿಹುದು ಗಾಳಿ ಮಾಘದ ಬೆಳಗಿನಂತೆ

ಸಖಿ

ಕೇಳೆ ಸಖಿ ಪ್ರಾಣ ಸಖಿ              ನೀ ನನ್ನ ಖುಷಿ..... ತಪ್ಪಿ ಹೋದ ದಾರಿಯಲ್ಲಿ ತಬ್ಬಿ ನಿಂತ ತಾಯಿಯೇ..... ಬತ್ತಿ ಹೋದ ಮನದಲ್ಲಿ ಪ್ರೀತಿ ಹರಿಸೋ ಗೆಳತಿಯೇ..... ಬಾಡಿಹೋದ ದಿನದಲ್ಲಿ ಸ್ಪೂರ್ತಿ ತುಂಬೊ ಚಿಲುಮೆಯೇ.. ಮಸುಕಾದ ಭರವಸೆಗೆ ಬೆಳಕಾಗೋ  ಮಿಂಚುವೇ...... ಅನುದಿನವೂ  ನೀ              ಚಿಗುರಂತೆ ಹಸಿರಾಗಿರು              ಹೂವಿನಂತೆ ಮೃದುವಾಗಿರು               ಉಸಿರಂತೆ ನನ್ನೊಳಗೇ ಇರು ಇಳಿದುಬಿಡು ನನ್ನೆದೆಯೊಳಗೆ ನಿನಗಾಗಿ ಮೀಸಲಿಟ್ಟ ಗುಡಿಯೊಳಗೆ ಬಾಳಲ್ಲಿ ಒಂದಾಗಿ  ಜೀವಕ್ಕೆ ಉಸಿರಾಗಿ ಇದ್ದುಬಿಡು ಕೊನೆಯತನಕ ನನ್ನ ಜೊತೆಗೆ 

ಅಮ್ಮ

ಮನದ ಮೊದಲ ಬರದ ಮಾತಿಗೆ ನಿನ್ನ ಧ್ವನಿಯ ಸ್ಪರ್ಶ ಸಾಲದೆ? ನಗುವ ಮರೆತ ನನ್ನ ನೆನಪಿಗೆ ಅಳುವ ಮರೆಸಲು ನೀನೆ ಬರುವೆಯೇನಮ್ಮಾ? ನಡೆವ ನಾಳೆಗೆ ಹೆಜ್ಜೆಯಾಗಿಹೆ ಕಳೆದ ನಿನ್ನೆಗೆ ಕಾವಲಾಗಿಹೆ ನುಡಿಯೊ ಇಂದಿಗೆ ಧ್ವನಿಯು ನೀನಿರೆ ನಿನ್ನ ಕಾಲ ತೊಟ್ಟಿಲ ಮೀನು ನಾನಮ್ಮ..... ದುಃಖ ಸುರಿಸೋ ಮನೆಯ ಮಾಳಿಗೆ ಹಸಿವ ನೆನೆಸೋ ಕೈಯ ಜೋಳಿಗೆ ಬದುಕ ತೋರಿಸೋ ಬೆಂಕಿ ದೀವಿಗೆ ಕಂಪು ಮರೆತ ದುಂಡು ಮಲ್ಲಿಗೆಯೊಳು ನೀನಿರುವೆಯಮ್ಮಾ..... ರಾತ್ರಿ ಬೆಳಕು ನಿನ್ನ ರಾಗವು  ಮಳೆಯ ಬಿಸಿಲು ನಿನ್ನ ಕೋಪವು  ಎಂದೋ ಮುಗಿದ ಸ್ವಂತ ಇಚ್ಛೆಯು  ಮೌನವಾದ ನಿನ್ನ ಕತೆಯ ಸೊಗಸು ಏನಮ್ಮ!!!......

ಮರುಳು ಜೀವನ

ಅದೊಂದು ಸಾಮಾನ್ಯವಾದ ಹಳ್ಳಿ. ಅದರ ಮಧ್ಯದಲ್ಲೊಂದು ಗುಡಿ. ನಗರದಿಂದ ಬಹು ದೂರದಲ್ಲಿದೆ. ಅಲ್ಲಿನ ಜನರು ಕೃಷಿಯನ್ನು ಅವಲಂಬಿಸಿ ಬದುಕು ಕಟ್ಟಿಕೊಂಡವರು. ಅವರಿಗೆ ವಿದ್ಯೆಯ ಪರಿಚಯವಿಲ್ಲ. ಬಹಳ ಮುಗ್ಧರು.              ಹಳ್ಳಿಯ ಅಂಚಿನಲ್ಲೊಂದು ನದಿ ಹರಿಯುತ್ತದೆ. ಅದರ ತೀರದಲ್ಲಿಯೇ ಗುಡಿಸಲು ಎನ್ನಬಹುದಾದ ಒಂದು ಮನೆ ಇದೆ.  ಅದು ಬದ್ರಿ ಎನ್ನುವ ವಯಸ್ಕ ಸನ್ಯಾಸಿ ಮತ್ತು ಹೊನ್ನ ಎನ್ನುವ ಆತನ ಎಳೆಯ ಶಿಷ್ಯನ ಮನೆ. ಅಲ್ಲಿಗೆ ಬಹಳ ಜನರ ಓಡಾಟವಿರಲಾರದು. ಸ್ವಲ್ಪ ವರ್ಷಗಳಿಂದ ಈಚೆಗೆ ಅವರಿಗಿರುವುದು ಬರಿಯ ಸಣ್ಣ ಮಕ್ಕಳ ಒಡನಾಟ ಮಾತ್ರ.ಬಡವರಾದ ಹಳ್ಳಿಯ ಜನರು ಅಕ್ಷರಗಳ ಅಭ್ಯಾಸಕ್ಕೆಂದು ಮಕ್ಕಳನ್ನು ಆತನಲ್ಲಿಗೆ ಕಳುಹಿಸುತ್ತಿದ್ದರು. ಬರುವ ಐದಾರು ಮಕ್ಕಳಿಗೆ ಮನೆಯ ಮುಂದಿರುವ ಮಾವಿನ ಮರದ ಕೆಳಗೆ ಪಾಠ ಮಾಡುತ್ತಿದ್ದ. ಆತನ ಊಟ ಉಪಚಾರಕ್ಕೆಂದು ಹಳ್ಳಿಗರು ತಾವು ಬೆಳೆದ ಧಾನ್ಯಗಳನ್ನೋ ತರಕಾರಿಯನ್ನೋ ಗುರುಕಾಣಿಕೆಯ ರೂಪದಲ್ಲಿ ನೀಡುತ್ತಿದ್ದರು. ಆತ ಭಿಕ್ಷೆಯ ರೂಪದಲ್ಲಿ ಸ್ವೀಕರಿಸುತ್ತಿದ್ದ. ವಿಶೇಷ ಸಂದರ್ಭಗಳಲ್ಲಿ ಆತನಿಗೆ ಹಳ್ಳಿಯೊಳಗೆ ಆಹ್ವಾನ ದೊರೆಯುತ್ತಿತ್ತು. ಹೀಗೊಮ್ಮೆ ಬದ್ರಿಗೆ ಊರಿನಿಂದ ನಾವಿಕನ ಮೂಲಕ ಜಾತ್ರೆಯ ಪೂಜೆಯನ್ನು ನೆರವೇರಿಸಲು ಕರೆ ಬಂತು. ನಾವಿಕನು ಆತನ ವೃತ್ತಿಯಲ್ಲಿ ಚತುರ. ಪ್ರತಿದಿನವೂ ಮಕ್ಕಳನ್ನು ನದಿ ದಾಟಿಸುತ್ತಿದ್ದವನು ಅವನೇ. ಗುರುಗಳು ಸಂತೋಷವಾಗಿ ಒಪ್ಪಿ ಶಿಷ್ಯನೋಡನೆ ಆತನ ದೋಣಿ ಹತ್ತಿದರು. ಜಾತ್ರೆಯ ಬೀದಿಯನ್ನು ಪ್ರವ

ಮನು ಮತ್ತು ತಾತ

                ದೂರದಲ್ಲಿ ಕಾಣುತ್ತಿರುವ ಮರ ರಸ್ತೆಯ ಹಿಂದಿನ ಯಾವುದೋ ತಿರುವಿನಲ್ಲಿ ಮಾಯವಾಯಿತು. ಪ್ರಯಾಣಕ್ಕೆ ಹೊರಟಿದ್ದ ಮನು ಕಿಟಕಿಯಿಂದ ತಲೆ ಹೊರಹಾಕಿ ಬೀಸುತ್ತಿದ್ದ ಗಾಳಿಯನ್ನು ಅನುಭವಿಸುತ್ತಿದ್ದ. ಮನಸ್ಸಿನೊಳಗಿರುವ ಬಹಳಷ್ಟು ಪ್ರಶ್ನೆಗಳು ಆ ಕ್ಷಣ ಅವನಿಗೆ ಜಗತ್ತನ್ನೇ ಮರೆಸಿದ್ದವು. ವಾಸ್ತವಕ್ಕೆ ಬರಲು ಬಸ್ ಕಂಡಕ್ಟರ್ ಜೋರಾಗಿ ಕೂಗಬೇಕಾಯಿತು.                ಮನುವಿಗೆ ಪರೀಕ್ಷೆಗಳು ಮುಗಿದು ಈಗ ರಜೆಯ ಕಾಲ. ಬುದ್ಧಿವಂತನಲ್ಲದ ಅವನ ಓದೇ ಒಂದು ಸಾಹಸ ಕಥೆ. ಮನುಷ್ಯನಲ್ಲಿ ಒಂದು ಅಂಶದ ಕೊರತೆಯಿದ್ದರೆ ಇನ್ನೊಂದರ ಆಧಿಕ್ಯವಿರುತ್ತದೆ. ಆತ ಜೀವನದ ಪ್ರತಿ ಕ್ಷಣವನ್ನು ಅದ್ಭುತವನ್ನಾಗಿ ಅನುಭವಿಸಲು ಬಯಸಿದವ. ಹಾಗಾಗಿ ಫಲಿತಾಂಶದ ಭಯವಾಗಿ ಅದು ಪ್ರಕಟವಾಗುವ ಹೊತ್ತಿಗೆ ಒಂದು ದಿನ ಬೆಳಿಗ್ಗೆ ಆತ ಮನೆಯಿಂದ ಹೊರಟ. ಮಧ್ಯಾಹ್ನದ ವೇಳೆಗೆ ಬಸ್ಸಿನಿಂದ ಇಳಿದು ಎರಡು ಮೈಲಿ ದೂರದಲ್ಲಿರುವ ತಾತನ ಮನೆಗೆ ಕಾಲ್ನಡಿಗೆಯಲ್ಲಿ ಹೊರಡಲು ನಿಶ್ಚಯಿಸಿದ. ನಡೆಯತೊಡಗಿದಾಗ ಅಲ್ಲಲ್ಲಿ ದಾರಿಯ ಪಕ್ಕ ಗುಡಿಸಲುಗಳು ಮುರಿದುಬೀಳಲು ತಯಾರಾಗಿರುವ ಜೋಪಡಿಗಳು ಕಾಣಿಸಿದವು. ಮುನ್ನಡೆದ. ಎರಡಂತಸ್ತಿನ ಭರ್ಜರಿ ಮನೆಗಳೂ ಕಾಣಿಸಿದವು. ಅವುಗಳನ್ನೆಲ್ಲ ನೋಡುತ್ತಾ ಅಂತೂ ತಾತನ ಮನೆಯ ಬಾಗಿಲು ಬಡಿಯುವ ಹೊತ್ತಿಗೆ ಸರಿಯಾದ ಊಟದ ಸಮಯ. ದಣಿವಾದ್ದರಿಂದ ಸೋಪಸ್ಕಾರದ ಊಟವಾದ ಮೇಲೆ ಸುಖ ನಿದ್ರೆಗೆ ಜಾರಿದ.           ಎದ್ದಾಗ ಸಂಜೆ ಸುಮಾರು 5 ಗಂಟೆ. ಮೊಬೈಲ್ ತೆಗೆಯಲು