ಸಖಿ

ಕೇಳೆ ಸಖಿ ಪ್ರಾಣ ಸಖಿ
             ನೀ ನನ್ನ ಖುಷಿ.....

ತಪ್ಪಿ ಹೋದ ದಾರಿಯಲ್ಲಿ ತಬ್ಬಿ ನಿಂತ ತಾಯಿಯೇ.....

ಬತ್ತಿ ಹೋದ ಮನದಲ್ಲಿ ಪ್ರೀತಿ ಹರಿಸೋ ಗೆಳತಿಯೇ.....

ಬಾಡಿಹೋದ ದಿನದಲ್ಲಿ ಸ್ಪೂರ್ತಿ ತುಂಬೊ ಚಿಲುಮೆಯೇ..

ಮಸುಕಾದ ಭರವಸೆಗೆ ಬೆಳಕಾಗೋ  ಮಿಂಚುವೇ......

ಅನುದಿನವೂ  ನೀ 

            ಚಿಗುರಂತೆ ಹಸಿರಾಗಿರು 

            ಹೂವಿನಂತೆ ಮೃದುವಾಗಿರು 

             ಉಸಿರಂತೆ ನನ್ನೊಳಗೇ ಇರು


ಇಳಿದುಬಿಡು ನನ್ನೆದೆಯೊಳಗೆ
ನಿನಗಾಗಿ ಮೀಸಲಿಟ್ಟ ಗುಡಿಯೊಳಗೆ
ಬಾಳಲ್ಲಿ ಒಂದಾಗಿ  ಜೀವಕ್ಕೆ ಉಸಿರಾಗಿ
ಇದ್ದುಬಿಡು ಕೊನೆಯತನಕ ನನ್ನ ಜೊತೆಗೆ 

Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ

ಚಂಚಲ