ಚಂಚಲ

ಚಿತ್ತದಲ್ ಚಿಂತೆಯಿರೆ ಉತ್ಸಾಹ ಸೋತಿಹೆ 
ಜಾರುತಿಹೆ ಮನವು ಕನಸಿನೆಡೆಗೆ
ಶುರುವಾಯ್ತವಳ ಹೆಜ್ಜೆ ಮನಸಿನೊಳಗೆ

ಕಡುಕಂಪ ಕಮಲ ಹೊತ್ತ ತುರುಬುಳ್ಳ ನೀರೆ...
ನೋಡಿ ದಾಹವಾಯ್ತವಳ ಗಾಢ ನೀಲಿಯ ಸೀರೆ...

ಸೌಂದರ್ಯ ಸೋರುತಿದೆ ಕುರುಳ ನಡುವೆ
ಚಿಕ್ಕ ಚಂದ್ರಮನವಳ ಮೂಗತುದಿಗೆ..

ಬೀಗುತಿರೆ ಕಣ್ಣುಗಳು ರಾಣಿಯಂತೆ..
ಬೀಸುತಿವೆ ರೆಪ್ಪೆಗಳು ಚಾಮರದಂತೆ..

ಹೊರಡುತಿಹ ಮಾತುಗಳು ಮಲ್ಲಿಗೆಯೇನೋ ...
ಹರಟುತಿಹ ತುಟಿಗಳವು ಮಾಟವೇನೋ...

ಬಳಕುತಿಹ ಕಾಯವದು ಬಳ್ಳಿಯೇನೋ..
ಗಲ್ಲದಿಂದೊಂದಡಿಗೆ ಮಧ್ಯ ನಾ ಬಂಧಿಯೇನೋ...

ಕತ್ತಲೊಳ್ ಕಿರಣದಂತೆ
ಅಕ್ಕರೆಯು ಸೊಕ್ಕರೆಯುವಂತೆ
ಅವಳಂದಂ ನನ್ನೆದೆಯಂ

ನೋಡಲವಳು ನನ್ನಲ್ಲಿ
ಬಾನು ಕರಿದಾಯ್ತು ಭಾನು ಬರಿದಾದ
ಭೂಮಿ ತಂಪಾಯ್ತು ಪಾದ ತೇವವಾಯ್ತು

ಹಿಮಗಿರಿಯ ಕನ್ಯೆ ಜನನದಿಯ ಗಂಗೆ 
ಮೈ ದಡವಲವಳು ಕನಸಿನಲ್ಲಿರುವ ಬೊಂಬೆ






Comments

Popular posts from this blog

ಅನಿಶ್ಚಿತ

ಸಮಯ ಸಮಸ್ಯೆ?

ನಗುವರಿಯದ ಮುಖ..

ಆದ್ಯತೆ ( priority )

ಅಮ್ಮ

ಮರುಳು ಜೀವನ

ಕೆಂಪು ಮಣ್ಣಿನ ನೆಲ

ಮನು ಮತ್ತು ತಾತ